ಕೈ ಬೀಸಿ ಕರೆಯುತಿದೆ…ಟೆಂಟ್ ಸಿನೆಮಾ!:

ಕೈ ಬೀಸಿ ಕರೆಯುತಿದೆ…ಟೆಂಟ್ ಸಿನೆಮಾ!: 

ಬೆಂಗಳೂರಿನಲ್ಲಿ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬಯಸುವವರಿಗಾಗಿ ಸಮಗ್ರ ಶಿಕ್ಷಣ ಕ್ರಮದೊಂದಿಗೆ ಸಕಲ ಸೌಲಭ್ಯಗಳನ್ನೂ ಉಳ್ಳ ಸುಸಜ್ಜಿತ ವಿದ್ಯಾ ಸಂಸ್ಥೆಯೆಂದರೆ – ಡಾ. ನಾಗತಿಹಳ್ಳಿ ಚಂದ್ರಶೇಖರ್ ತಂಡದವರ ‘ಟೆಂಟ್ ಸಿನೆಮಾ’.

ಈ ಶಾಲೆಯ ಅದ್ವಿತೀಯ ಅಂಶಗಳೆಂದರೆ:

  • ಅಧಿಕ ಪ್ರಾಯೋಗಿಕ ತರಬೇತಿ, ಕಡಿಮೆ ಪಠ್ಯಪುಸ್ತಕ ಮಾದರಿ
  • ಚಿತ್ರರಂಗದ ಪರಿಣಿತರಿಂದ ತರಬೇತಿ
  • ಅಚ್ಚುಕಟ್ಟಾಗಿ ಸಂಯೋಜಿಸಿದ ನೂತನ ಪಠ್ಯಕ್ರಮ
  • ಸ್ಟುಡಿಯೋ ಭೇಟಿ ಮತ್ತು ಹೊರಾಂಗಣ ಪ್ರವಾಸ
  • ನಿರಂತರ ಅಭಿವೃದ್ಧಿ ಹೊಂದುವ ಕೋರ್ಸುಗಳು
  • ಆಡಿಶನ್ ಗೆ ಉತ್ತಮ ಅವಕಾಶಗಳು

೨೦೧೩ರಲ್ಲಿ ಸ್ಥಾಪಿತವಾದ ಜನಪ್ರಿಯ ಹಿರಿಯ ಸಾಹಿತಿ-  ಚಿತ್ರ ನಿರ್ದೇಶಕರಾದ ‘ಮೇಷ್ಟ್ರು’ ಎಂದೇ ಕರೆಯಲ್ಪಡುವ ನಾಗತಿಹಳ್ಳಿ ಚಂದ್ರಶೇಖರ್ ರವರ ಈ ಯಶಸ್ವಿ ಪ್ರಯೋಗದಲ್ಲಿ ನಾಡಿನ ಹೊಸ ಯುವಕ-ಯುವತಿಯರೂ, ಮಧ್ಯವಯಸ್ಕರಲ್ಲದೇ, ಚಿಗುರುವ ಪ್ರತಿಭೆಗಳಾದ ಹೊಸ ಕಲಾವಿದರೂ, ಎಲ್ಲಾ ಆಸಕ್ತ ವರ್ಗದವರೂ ಚಿತ್ರರಂಗದ ವಿವಿಧ ಕಸುಬುಗಳಲ್ಲಿ ತಮ್ಮನ್ನು ತಾವು ತರಬೇತಿ ಪಡೆದು ತೊಡಗಿಸಿಕೊಳ್ಳಲು ಸೇರಬಹುದಾಗಿದೆ. ಇಂತಾ ಉತ್ಸುಕರಾದರೆಲ್ಲವರಿಗೂ ವರ್ಷವಿಡೀ ತೆರೆದಿರುವ ಈ ಚಿತ್ರಶಾಲೆಯಲ್ಲಿ ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಗೂ ಜನಪ್ರಿಯ ಚಿತ್ರರಂಗ ಮತ್ತು ಕಿರು ತೆರೆಯ ದಿಗ್ಗಜರೂ, ಹೊಸಪ್ರತಿಭೆಗಳೂ ತಮ್ಮ ಯಶಸ್ವಿ ವೃತ್ತಿ ಜೀವನದ ಅನುಭವವನ್ನು ಧಾರೆಯೆರೆದು ಕಲೆಯನ್ನು ಕಲಿಸುವ ಕೈಂಕರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಈ ಶಾಲೆಯಲ್ಲಿ ಇದುವರೆಗೂ ೨೫ ಕ್ಕೂ ಹೆಚ್ಚು ಕಿರುಚಿತ್ರಗಳನ್ನು ಸಂಪೂರ್ಣವಾಗಿ ಅಭಿನಯ ಕೋರ್ಸಿನ ವಿದ್ಯಾರ್ಥಿಗಳೇ ನಿರ್ಮಿಸಿದ್ದಾರೆ.(ಯೂ ಟ್ಯೂಬ್ ಚಾನೆಲ್ ಕೊಂಡಿ ಕೆಳಗಿದೆ). ಈ ಚಿತ್ರಗಳ ನಿರ್ಮಾಣದಲ್ಲಿ ಚಿತ್ರಕತೆ, ಛಾಯಾಗ್ರಹಣ, ಚಿತ್ರ ನಿರ್ಮಾಣ ಮುಂತಾದ ಕೋರ್ಸಿನ ವಿದ್ಯಾರ್ಥಿಗಳನ್ನೂ ಭಾಗವಹಿಸಲು ಅವಕಾಶ ನೀಡುತ್ತಾರೆ.  ಈ ಕಿರು ಚಿತ್ರ ನಿರ್ಮಾಣದ ಮೂಲಕ ಅವರಿಗೆ ಮುಖ್ಯವಾಹಿನಿ ಚಿತ್ರರಂಗದ ಉತ್ತಮ ಅನುಭವವನ್ನು ಕಟ್ಟಿಕೊಡಲಾಗುತ್ತದೆ.

ಚಿತ್ರರಂಗದ ವಿವಿಧ ಕೌಶಲಗಳಾದ  ಅಭಿನಯ, ಚಿತ್ರಕತೆ ರಚನೆ, ನಿರ್ದೇಶನ, ಸಿನೆಮೆಟೋಗ್ರಾಫಿ ( ಛಾಯಾಗ್ರಹಣ), ಗೀತ ಸಾಹಿತ್ಯ, ಸಂಭಾಷಣೆ, ಸಂಗೀತ, ಸಂಕಲನ (ಎಡಿಟಿಂಗ್) ಮುಂತಾದ ಎಲ್ಲಾ ಶಾಖೆಗಳಲ್ಲೂ ಪ್ರೊಫೆಶನಲ್  (ವೃತ್ತಿಪರ) ಪರಿಣತಿ ಪಡೆಯಬಹುದಾಗಿದೆ. ಎಲ್ಲ ವರ್ಗದವರಿಗೆ ಎಟಕುವ ಅವಧಿ ಮತ್ತು ಶುಲ್ಕದಲ್ಲಿ ಹಲವು ಆಯ್ಕೆಗಳಿರುವ ಫುಲ್ ಟೈಮ್, ಪಾರ್ಟ್ ಟೈಮ್ ಅಲ್ಲದೇ ವಾರಾಂತ್ಯದ ಕೋರ್ಸುಗಳನ್ನೂ, ಕಾರ್ಯಾಗಾರಗಳನ್ನೂ, ಶಿಬಿರಗಳನ್ನೂ ಇಲ್ಲಿ ಏರ್ಪಾಡು ಮಾಡುತ್ತಿರುತ್ತಾರೆ.

ಕ್ಲಾಸ್ ರೂಮ್ ಶಿಕ್ಷಣ, ಗುಂಪು ಚಟುವಟಿಕೆ, ಚಿತ್ರ ವೀಕ್ಷಣೆ, ಸ್ಟುಡಿಯೋ ಭೇಟಿ, ಹೊರಾಂಗಣ ಪ್ರವಾಸ, ಅತಿಥಿ ಭಾಷಣ ಹಾಗೂ ಕಿರು ಚಿತ್ರ ನಿರ್ಮಾಣ ಮುಂತಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ಉತ್ಸಾಹದಿಂದ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿ ಅವಕಾಶ ನೀಡಲಾಗುತ್ತದೆ.  ಚಿತ್ರರಂಗದ ಖ್ಯಾತ ಕಲಾವಿದರಾದ ನಿರ್ದೇಶಕ ಪವನ್ ಕೆ ವಡೆಯರ್, ಟಿ ಎನ್ ಸೀತಾರಾಂ, ಪಿ ಶೇಷಾದ್ರಿ, ನಾಯಕ ನಟ ರಮೇಶ್ ಅರವಿಂದ್,

ಹಿರಿಯ ನಟ ಶಿವರಾಂ, ಅಭಯ್ ಸಿಂಹ, ಚಿತ್ರಸಾಹಿತಿ ಕವಿರಾಜ್, ಸಂಗೀತ ನಿರ್ದೇಶಕ ವಿ. ಮನೋಹರ್, ನಟಿ ವಿನಯಾ ಪ್ರಸಾದ್, ನಿರ್ದೇಶಕ ಪ್ರಕಾಶ್ ಬೆಳವಾಡಿ, ಛಾಯಾಗ್ರಾಹಕ ಮನೋಹರ್ ಜೋಶಿ, ಸತ್ಯ ಹೆಗಡೆ, ರವಿ ಕುಮಾರ್ ಸನಾ ಮತ್ತಿತರರಿಂದ ಆಗಾಗ ನೆಡಯುವ ಅತಿಥಿ ಭಾಷಣ ಮತ್ತು ಸಂವಾದದಿಂದ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಸುವರ್ಣಾವಕಾಶವನ್ನೂ ಟೆಂಟ್ ಸಿನೆಮಾ ಸಂಸ್ಥೆ ನೀಡುತ್ತಾ ಬಂದಿದೆ.

ಈಗಾಗಲೇ ಹಲವಾರು ಪ್ರತಿಭಾವಂತ ಬಾಲ ಮತ್ತು ಯುವ ವಿದ್ಯಾರ್ಥಿಗಳು ಇಲ್ಲಿನ ತರಬೇತಿ ಪಡೆದು ಉತ್ತೀರ್ಣರಾಗಿ ರಂಗಭೂಮಿ, ಕಿರು ತೆರೆಯ ಧಾರಾವಾಹಿಗಳೂ, ರಿಯಾಲಿಟೀ ಪ್ರದರ್ಶನಗಳಲ್ಲೂ ಹಾಗು ಚಿತ್ರರಂಗದಲ್ಲೂ ಸಕ್ರಿಯವಾಗಿ ದುಡಿಯಲಾರಂಭಿಸಿದ್ದಾರೆ.

ಇಲ್ಲಿ ಚಿತ್ರೋದ್ಯಮದ ಖ್ಯಾತನಾಮರಾದ ಯೋಗರಾಜ್ ಭಟ್, ಪವನ್ ಕುಮಾರ್, ಅರ್ಜುನ್ ಜನ್ಯ,  ಶಶಾಂಕ್, ಗಿರೀಶ್ ಕಾಸರವಳ್ಳಿ, ಅನನ್ಯ ಕಾಸರವಳ್ಳಿ, ನಟಿ ಸುಧಾ ರಾಣಿ, ನಟ ಧನಂಜಯ್, ಸುಚೇಂದ್ರ ಪ್ರಸಾದ್ ಮೊದಲಾದವರು ಇಲ್ಲಿನ ಕೋರ್ಸುಗಳಲ್ಲಿ ಅತಿಥಿ ಭಾಷಣ ಮಾಡಿ ಹಲವಾರು ಮುಖ್ಯ ಮಾಹಿತಿಯನ್ನು ವಿದ್ಯಾರ್ಥಿಗ ಗಳೊಂದಿಗೆ ಹಂಚಿಕೊಂಡಿರುತ್ತಾರೆ.

ಇಲ್ಲಿ ಮುಂಬರುವ ಹೊಸ ಕೋರ್ಸುಗಳಲ್ಲಿ ಪ್ರಮುಖವಾದದ್ದು:

ಪೂರ್ಣ ಚಿತ್ರನಿರ್ಮಾಣ ( ಫಿಲ್ಮ್ ಮೇಕಿಂಗ್) ಕೋರ್ಸ್- ಜನವರಿ ೨೧ ರಿಂದ ೨೬ ರವರೆಗೆ ಆರು ದಿನ. ಇದರಡಿಯಲ್ಲಿ ಒಂದು ಪೂರ್ಣ ಪ್ರಮಾಣದ ಚಿತ್ರದಲ್ಲಿ ಅಡಕವಾದ ತಾರಾಗಣ ಮತ್ತು ತಂತ್ರಜ್ಞರ ಆಯ್ಕೆ, ಪೂರ್ವ ಸಿದ್ಧತೆಗಳು, ಚಿತ್ರಕತೆ, ಛಾಯಾಗ್ರಹಣ, ಸಾಹಿತ್ಯ  ಸಂಗೀತ,  ಸಂಕಲನ ಇತ್ಯಾದಿ ವೃತ್ತಿಗಳನ್ನು ನಿರ್ದೇಶಕ ಕೆ. ಎಂ. ಚೈತನ್ಯ ರ ಮಾರ್ಗದರ್ಶನದಲ್ಲಿ ನೆಡೆಸಲಾಗುವುದು. ಚಿತ್ರ ನಿರ್ಮಾಣದ ಸಂಪೂರ್ಣ ಪದ್ಧತಿಯನ್ನು ನಾಗತಿಹಳ್ಳಿ ಚಂದ್ರಶೇಖರ್ ರವರೇ ಕಲಿಸಿಕೊಡುತ್ತಾರೆ.

ಸಂಗೀತವನ್ನು ಪೂರ್ಣಚಂದ್ರ ತೇಜಸ್ವಿ, ಚಿತ್ರನಿರ್ಮಾಣದಲ್ಲಿ  ಅರ್ಥವ್ಯವಸ್ಥೆ/ ಉಳಿತಾಯದ (economics ) ಬಗ್ಗೆ    ‘ಲೂಸಿಯಾ ’ ಖ್ಯಾತಿ ಪವನ್ ಕುಮಾರ್ ಅತಿಥಿ ಭಾಷಣ ನೀಡುತ್ತಾರೆ. ಕಲಿಸಿಕೊಡಲಿದ್ದಾರೆ.

ಈ ತರಬೇತಿಯಲ್ಲಿ  ಒಂದು ಕಿರು ಚಿತ್ರವನ್ನು ಆದಿಯಿಂದ ಅಂತ್ಯದವರೆಗೂ  ಇದಕ್ಕೆ ಸೇರಿದ್ದ ವಿದ್ಯಾರ್ಥಿಗಳ ಸಹಯೋಗ ಮತ್ತು ಭಾಗವಹಿಸುವಿಕೆ ಮೂಲಕ ಕಲಿಸಿಕೊಡಲಾಗುತ್ತದೆ.

ವಿವರಗಳಿಗಾಗಿ ಸಂಪರ್ಕಿಸಿ:-

ಟೆಂಟ್ ಸಿನೆಮಾ

೧೮೪, ಲಿರಿಕ್ಸ್, ಮೂರನೆ ಮಹಡಿ, ೧೭ನೆ ಮೈನ್, ಬನಶಂಕರಿ ೨ನೆ ಘಟ್ಟ, ಬೆಂಗಳೂರು -೭೦

( ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್ ಬಳಿ)

ದೂರವಾಣಿ: 080-65695500/99005 55255/99455 46007

Email: beena.tentcinemaschool@gmail.com

Web: www.tentcinema.com

Facebook : tentcinemafilmschool

 Youtube.com/tentcinema.

 

 

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s