ಬ್ಯಾಂಕ್ ಅಧಿಕಾರಿಗಳೆಂಬ ಬ್ಯಾಂಕ್ ಅಧಿಕಾರಿಗಳೆಂಬ “ಕೆಲವು”… ಮಹಾ ಭ್ರಷ್ಟರನ್ನು ಬಹಿಷ್ಕರಿಸಿ…

ಬೆಳಿಗಾದಾರೆ ಇದೇ ಸುದ್ದಿ…. ನಮ್ಮ ಹಣವನ್ನು ಕಾಪಾಡಿ ಉಳಿಸಿ ಬೆಳೆಸಬೇಕಿದ್ದ ಬ್ಯಾಂಕ್ ಅಧಿಕಾರಿ ವರ್ಗ ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತದಿಂದ ಬಂಗಾಳದವರೆಗೂ ತಮ್ಮ ಕಾಳ ಕೃತ್ಯವನ್ನು ಎಸಗುತ್ತಾ ಹೊಸ ನೋಟುಗಳನ್ನು ಕೋಟಿಗಟ್ಟಲೆ ಲೆಕ್ಕದಲ್ಲಿ ನುಂಗಿ ನೀರು ಕುಡಿಯುತ್ತಾ ಇಂದಿನ ಹಣದ ಹಸಿವಿನ ಸಮಾಜಕ್ಕೆ ದೊಡ್ದ ಪಾಪವನ್ನೇ ಎಸಗಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ.

ನಾನೂ ಎಂದೂ ವೈಯಕ್ತಿಕ ವರ್ಗವನ್ನು ದೂಷಿಸ್ದಿದವನಲ್ಲ..ಆದರೆ ಈ ಬಾರಿ ಬ್ಯಾಂಕ್ ಅಧಿಕಾರಿಗಳು ಕಾಳಧನಿಕರು, ಭ್ರಷ್ಟ ಸರಕಾರಿ ಅಧಿಕಾರಿಗಳು, ವಾಣಿಜ್ಯೋದ್ಯಮಿಗಳ ಜತೆ ಶಾಮೀಲಾಗಿ ದೇಶಕ್ಕೆ ಮಹಾಪರಾಧವನ್ನು ನಾಚಿಕೆಯಿಲ್ಲದೇ ಎಸಗುತ್ತಿದ್ದಾರೆ. ಹಣವನ್ನು ಸಾರ್ವಜನಿಕವಾಗಿ ವಿತರಿಸದೇ ಎಲ್ಲಾ ಬಗೆಯ ಅಪರಾಧವನ್ನು ಒಳಗೊಳಗೇ ಮಾಡುತಿದ್ದಾರೆ.
ದೇಶದ ಪ್ರಧಾನಿ ತೊಟ್ಟ ಆರೋಗ್ಯಕರ ಸದುದ್ದೇಶ ಭರಿತ ದೀಕ್ಷೆಗೆ ಕಳಂಕವೆಸಗುವಂತೆ ದೇಶದಾದ್ಯಂತ ಯಾವ ವ್ಯತ್ಯಾಸವೂ ಇಲ್ಲದಂತೆ ಎಲ್ಲಾ ಬ್ಯಾಂಕಿನ ಹಿರಿಯ ಅಧಿಕಾರಿಗಳೂ ಈ ಶೋಷಣೆಯಲ್ಲಿ, ಅಪರಾಧದಲ್ಲಿ ಎಗ್ಗಿಲ್ಲದೇ ಭಾಗವಹಿಸಿದ್ದಾರೆ…ಆದಾಯ ತೆರಿಗೆ ವಿಭಾಗದವರು ತಮ್ಮ ಕೈಲಾದ ಮಟ್ಟಿಗೆ ಇವರನ್ನು ಪತ್ತೆ ಹಚ್ಚಿ ಬಯಲಿಗೆಳೆಯುತ್ತಲೇ ಇದ್ದಾರೆ, ಆದರೆ ಭಯವೆಂದರೆ, ಇವರ ಕಣ್ಣಿಗೂ ಮಣ್ಣೆರಚಿ ಸುರಕ್ಷಿತವಾಗಿ ಹೊಸ ನೋಟು ಹಳೆ ನೋಟುಗಳನ್ನು ಕೋಟಿಗಟ್ಟಲೆ ಬಚ್ಚಿಟ್ಟಿರುವ ಎಲ್ಲ ಭ್ರಷ್ಟರೂ ಹೀಗೇ ಸಿಕ್ಕಿ ಬೀಳುತ್ತಾರೆಂಬ ಭರವಸೆ ಯಾರಿಗಿದೆ??..
Is this the tip of the Iceberg?
ಒಂದು ಕಾಲದಲ್ಲಿ ಬ್ಯಾಂಕಿನಲ್ಲಿ ನೌಕರಿ ಮಾಡುವವರಿಗೆ ( ೮೦-೯೦ ರ ದಶಕಗಳಲ್ಲಿ) ಇನ್ನಿಲ್ಲದ ಸಾಮಾಜಿಕ ಮರ್ಯಾದೆ, ವರರಿಗೆ ಮದುವೆಯಲ್ಲಿ ಹೆಣ್ಣು ಕೊಡಲು ದುಂಬಾಲು ಬೀಳುತ್ತಿದ್ದವರೂ ಉಂಟು..
ಆದರೆ ಈಗ, ಇಂತಾ ಲಜ್ಜೆಗೇಡಿ ಬ್ಯಾಂಕ್ ಭ್ರಷ್ಟರನ್ನು ಸಾಮಾಜಿಕವಾಗಿ ಬಹಿಷ್ಕಾರ ಮಾಡಿ, ತುಚ್ಚೀಕಾರ ಮಾಡುವ ಸಮಯ ಬಂದಿದೆ ಎಂದು ಬಲವಾಗಿ ಅನಿಸುತ್ತಿದೆ..
#BOYCOTT-CORRUPT-BANKMEN!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s